27th August 2024
ತಾಯಿಯ ಹೆಸರಿನಲ್ಲಿ ಒಂದು ಮರ ಬೆಳಸಿ ಪೋಷಣೆ ಮಾಡಿ -ಚನ್ನವೀರಪ್ಪ
ದಿಟ್ಟ ಹೆಜ್ಜೆ ನ್ಯೂಸ್
ಕವಿತಾಳ: ನಮಗೆ ಜನ್ಮ ಕೊಟ್ಟ ತಾಯಿಗೆ ನಾವು ಏನೂ ಕೊಟ್ಟರೂ ಆಕೆಯ ಋಣ ತೀರಿಸಲು ಸಾಧ್ಯವಿಲ್ಲ. ನಮ್ಮ ಸುತ್ತಲಿನ ಪರಿಸರದಲ್ಲಿ ನೀರು, ಗಾಳಿ, ಬೆಳಕು, ಆಹಾರ ದೊರೆಯುತ್ತದೆ.ಪ್ರಕೃತಿ ಮತ್ತು ಅಮ್ಮನ ಋಣವನ್ನು ಎಂದಿಗೂ ತೀರಿಸಲು ಆಗುವುದಿಲ್ಲ, ಅದಕ್ಕಾಗಿ ಜನ್ಮ ಕೊಟ್ಟ ತಾಯಿಯ ಹೆಸರಿನಲ್ಲಿ ಒಂದು ಮರ ಬೆಳಸಿ ಅದನ್ನು ಪೋಷಣೆ ಮಾಡಬೇಕೆಂದು ಸಿರವಾರ ತಾಲೂಕ ಪಂಚಾಯತಿ ಯೋಜನಾಧಿಕಾರಿ ಚೆನ್ನವೀರಪ್ಪ ಹೇಳಿದರು.
ಸಾಮಾಜಿಕ ಅರಣ್ಯ ಇಲಾಖೆ ಮಾನ್ವಿ, ಸಿರವಾರ ಮತ್ತು ತಾಲೂಕ ಪಂಚಾಯತಿ ಸಿರವಾರ ಹಾಗೂ ಗ್ರಾಪಂ.ಬಾಗಲವಾಡ ಇವರ ಸಹಯೋಗದಲ್ಲಿ ಶುಕ್ರವಾರ ಏರ್ಪಡಿಸಿದ್ದ ತಾಯಿಯ ಹೆಸರಿನಲ್ಲಿ ಒಂದು ವೃಕ್ಷ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ದೇಶದ ಅಭಿವೃದ್ಧಿಗಾಗಿ ಪ್ರಕೃತಿ ಪ್ರಧಾನ ಸಂಪತ್ತುಯಾಗಿದೆ.ಪ್ರತಿಯೊಬ್ಬರೂ ನಿಮ್ಮ ಮನೆಯ ಮುಂದೆ ತಾಯಿಯ ಹೆಸರಿನಲ್ಲಿ ಒಂದು ಗಿಡ ಮರ ಬೆಳಸಿ ಪೋಷಣೆ ಮಾಡಬೇಕು.ಪರಿಸರದ ಮೇಲೆ ಅತಿಯಾದ ದಬ್ಬಾಳಿಕೆಯಿಂದ ಪ್ರಕೃತಿ ನಾಶವಾಗುತ್ತಿದೆ.ಹೀಗಾಗಿ ಪ್ರಕೃತಿಯಲ್ಲಿ ವಿವಿಧ ರೀತಿಯ ಪ್ರಕೃತಿ ವಿಕೋಪಗಳು ನಡೆಯುತ್ತಿವೆ.ಪ್ರಕೃತಿಯನ್ನು ಸಂರಕ್ಷಣೆ ಮಾಡಿದರೆ ಮಾತ್ರ ಉತ್ತಮವಾದ ಮಳೆ, ಬೆಳೆ ಬರಲು ಸಾಧ್ಯವಾಗಿದೆ. ಪ್ರತಿಯೊಬ್ಬರೂ ಪರಿಸರ ಬೆಳಸಿ ಸಂರಕ್ಷಣೆ ಮಾಡಲು ಮುಂದಾಗಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಬಾಗಲವಾಡ ಗ್ರಾಪಂ. ಅಧ್ಯಕ್ಷ ತಿಪ್ಪಣ್ಣ ವಕೀಲ, ತಾಲೂಕ ವಸತಿ ನೋಡಲ್ ಅಧಿಕಾರಿ ಗೋಪಾಲ್ ಬಡಿಗೇರ್, ಐ ಇ ಸಿ ಸಂಯೋಜಕ ರಾಜೇಂದ್ರಕುಮಾರ, ವಲಯ ಅರಣ್ಯಾಧಿಕಾರಿ ರಮೇಶ ಬಡಿಗೇರ್, ಗ್ರಾಪಂ. ಪಿ ಡಿ ಓ ದೇವೇಂದ್ರಪ್ಪ, ಕಾರ್ಯದರ್ಶಿ ಈಕಪ್ಪಪವಾರ, ಹಾಗೂ ಗ್ರಾಪಂ. ಸದಸ್ಯರು ಸೇರಿದಂತೆ ಇತರಿದ್ದರು.
ಭಗವಾನ ಮಹಾವೀರ ಜಯಂತಿ ಆಚರಣೆ ಕುರಿತು ತಹಶೀಲ್ದಾರ ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಭೆ
ಕುಷ್ಟಗಿಯ ಶ್ರೀ ರಾಮ ದೇವರ ದೇವಸ್ಥಾನದಲ್ಲಿ ಜರುಗಿದ ಶ್ರೀ ರಾಮನವಮಿ ಉತ್ಸವ ಶ್ರದ್ಧಾಭಕ್ತಿಯಿಂದ ಜರುಗಿದ ಶ್ರೀ ರಾಮನವಮಿ ಉತ್ಸವ: ಭಕ್ತರಿಗೆ ಕೋಸಂಬರಿ, ಪಾನಕ ವಿತರಣೆ
ಗಡಿ ತಾಲೂಕು ಆಳಂದನಲ್ಲಿ ಡಿ.ಸಿ. ಸಂಚಾರ: ಕುಡಿಯುವ ನೀರಿನ ಸಮಸ್ಯೆ ಕುರಿತು ಸಾರ್ವಜನಿಕರ ಸಮಸ್ಯೆ ಆಲಿಕೆ
ಡಾ,ಬಿ,ಆರ್,ಅಂಬೇಡ್ಕರ ಪ್ರತಿಮೆಗೆ ಸ್ಥಳವಕಾಶಕ್ಕೆ ಸ್ಪಂಧಿಸಿದ ಸಚಿವ ಡಾ,ಮಾಹಾದೇವಪ್ಪವರಿಗೆ ಗೌರವ ಸನ್ಮಾನ!!